ಅಂತರಿಕ್ಷಕ್ಕೆ ತೆರಳಿದ ಸೌದಿಯ ಮೊದಲ ಮಹಿಳಾ ಗಗನಯಾನಿ ರಯಾನಾ ಬರ್ನಾವಿ
ವಾಷಿಂಗ್ಟನ್, ಮೇ 22: ಸೌದಿ ಅರೆಬಿಯಾದ ಮೊದಲ ಮಹಿಳಾ ಗಗನಯಾನಿ ಸೇರಿದಂತೆ ಸ್ಪೇಸ್ಎಕ್ಸ್ ರಾಕೆಟ್ ನಲ್ಲಿ ರವಿವಾರ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಯಾಗಿದೆ.
ಸೌದಿ ಅರೆಬಿಯಾದ ಮೊದಲ ಮಹಿಳಾ ಗಗನಯಾನಿ ರಯಾನಾ ಬರ್ನಾವಿ, ಸೌದಿ ವಾಯುಪಡೆಯ ಪೈಲಟ್ ಅಲಿ ಅಲ್-ಖಾರ್ನಿ, ಕೆನಡಿ ಬಾಹ್ಯಾಕಾಶ ಕೇಂದ್ರದ ನಿವೃತ್ತ ನಾಸಾ ಗಗನಯಾತ್ರಿ ಹಾಗೂ ಅಮೆರಿಕದ ಉದ್ಯಮಿ ಇದ್ದಾರೆ.
ಸೋಮವಾರ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಲಿರುವ ಈ ನಾಲ್ವರು ಅಲ್ಲಿ ಒಂದು ವಾರ ಕಳೆದ ಬಳಿಕ ಫ್ಲೋರಿಡಾದ ಕಡಲ ತೀರಕ್ಕೆ ಬಂದಿಳಿಯಲಿದ್ದಾರೆ ಎಂದು ವರದಿ ಹೇಳಿದೆ.
ನಾಸಾದ ನಿವೃತ್ತ ಗಗನಯಾತ್ರಿ, ಬಾಹ್ಯಾಕಾಶದಲ್ಲಿ ಒಟ್ಟು 665 ದಿನ ವಾಸಿಸಿದ ದಾಖಲೆ ಬರೆದಿರುವ ಪೆಗೀ ವಿಟ್ಸನ್ ನೇತೃತ್ವದಲ್ಲಿ ಈ ಗಗನಯಾತ್ರೆ ನಡೆಯುತ್ತಿದ್ದು ಬಾಹ್ಯಾಕಾಶ ನಿಲ್ದಾಣದ ಪ್ರಥಮ ಮಹಿಳಾ ಕಮಾಂಡರ್ ಎಂಬ ದಾಖಲೆಗೆ ವಿಟ್ಸನ್ ಪಾತ್ರರಾಗಿದ್ದಾರೆ.
Next Story