varthabharthi


ಅಂತಾರಾಷ್ಟ್ರೀಯ

ನೇಮಕಾತಿಗಳಲ್ಲಿ ರಾಜಕೀಯ ಹಸ್ತಕ್ಷೇಪ, ಸಿಬ್ಬಂದಿಯಲ್ಲಿ ವೈವಿಧ್ಯತೆಯ ಕೊರತೆ ಕಾರಣ

ಎನ್‌ಎಚ್‌ಆರ್‌ಸಿ ಮಾನ್ಯತೆಯನ್ನು ತಡೆಹಿಡಿದ ವಿಶ್ವಸಂಸ್ಥೆಗೆ ಒಳಪಟ್ಟ ಜಾಗತಿಕ ಮಾನವಹಕ್ಕು ಸಂಸ್ಥೆ

ವಾರ್ತಾ ಭಾರತಿ : 25 May, 2023

NHRC| Photo: PTI

ವಿಶ್ವಸಂಸ್ಥೆ, ಮೇ 25: ವಿಶ್ವಸಂಸ್ಥೆಯ ಮಾನ್ಯತೆ ಪಡೆದಿರುವ ಮಾನವಹಕ್ಕುಗಳ ಸಂಘಟನೆ ‘ಗ್ಲೋಬಲ್ ಅಲಯನ್ಸ್ ಆಫ್ ನ್ಯಾಶನಲ್ ಹ್ಯೂಮನ್ ರೈಟ್ಸ್ ಇನ್ಸ್ಟಿಟ್ಯೂಶನ್ಸ್’, ಭಾರತದ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ (NHRC)ಕ್ಕೆ ಮಾನ್ಯತೆ ನೀಡುವುದನ್ನು ಸತತ ಎರಡನೇ ಬಾರಿಗೆ ಮುಂದೂಡಿದೆ.

ನೇಮಕಾತಿಗಳಲ್ಲಿ ರಾಜಕೀಯ ಹಸ್ತಕ್ಷೇಪ, ಮಾನವಹಕ್ಕುಗಳ ಉಲ್ಲಂಘನೆ ಪ್ರಕರಣಗಳ ತನಿಖೆಯಲ್ಲಿ ಪೊಲೀಸರ ಶಾಮೀಲಾತಿ, ಶೋಷಿತ ವರ್ಗಗಳ ರಕ್ಷಣೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳದಿರುವುದು, ಸಿಬ್ಬಂದಿಯಲ್ಲಿ ವೈವಿಧ್ಯತೆಯ ಕೊರತೆ ಮತ್ತು ನಾಗರಿಕ ಸಮಾಜದೊಂದಿಗಿನ ಸಹಕಾರದ ಕೊರತೆ- ಮುಂತಾದ ಕಾರಣಗಳನ್ನು ಅದು ತನ್ನ ನಿರ್ಧಾರಕ್ಕೆ ಕೊಟ್ಟಿದೆ.

1999ರಲ್ಲಿ, ದರ್ಜೆಗಳನ್ನು ಮೊದಲ ಬಾರಿಗೆ ನೀಡಿದಾಗ, ಭಾರತೀಯ ಮಾನವಹಕ್ಕುಗಳ ಆಯೋಗಕ್ಕೆ ಅತ್ಯುನ್ನತ ‘ಎ’ ದರ್ಜೆಯನ್ನು ನೀಡಲಾಗಿತ್ತು.

ಆದರೆ, ಮಾರ್ಚ್ ನಲ್ಲಿ ನಡೆದ ಇತ್ತೀಚಿನ ವಿಶ್ಲೇಷಣೆಯ ವೇಳೆ, ಗ್ಲೋಬಲ್ ಅಲಯನ್ಸ್ ಆಫ್ ನ್ಯಾಶನಲ್ ಹ್ಯೂಮನ್ ರೈಟ್ಸ್ ಇನ್ಸ್ಟಿಟ್ಯೂಶನ್ಸ್ (GANHRI) ಎನ್ಎಚ್ಆರ್ಸಿಯ ಮಾನ್ಯತೆಗೆ ತಡೆ ನೀಡಿದೆ. ಜಿಎಎನ್ಎಚ್ಆರ್ಐ ವ್ಯಕ್ತಪಡಿಸಿರುವ ಕಳವಳಗಳನ್ನು ಪರಿಹರಿಸಲು ಎನ್‌ಎಚ್‌ಆರ್‌ಸಿ ಒಂದು ವರ್ಷದಲ್ಲಿ ಕ್ರಮ ತೆಗೆದುಕೊಳ್ಳದಿದ್ದರೆ, ಭಾರತದ ಸಾಂವಿಧಾನಿಕ ಮಾನವಹಕ್ಕುಗಳ ಸಂಸ್ಥೆಯ ದರ್ಜೆಯನ್ನು ‘ಬಿ’ಗೆ ಇಳಿಸಬಹುದಾಗಿದೆ.

ಎನ್‌ಎಚ್‌ಆರ್‌ಸಿ ಮಾನ್ಯತೆಯನ್ನು 2016ರಲ್ಲೂ ತಡೆಹಿಡಿಯಲಾಗಿತ್ತು. ಆದರೆ, ಒಂದು ವರ್ಷದ ಬಳಿಕ, ಅದರ ‘ಎ’ ದರ್ಜೆಯನ್ನು 2017 ನವೆಂಬರ್ ನಲ್ಲಿ ಮರಳಿಸಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)