varthabharthi


ರಾಷ್ಟ್ರೀಯ

ರಜೆ ನಗದೀಕರಣಕ್ಕೆ 25 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ

ವಾರ್ತಾ ಭಾರತಿ : 25 May, 2023

Photo; PTI

ಹೊಸದಿಲ್ಲಿ, ಮೇ 25: ವೇತನ ಪಡೆಯುವ ಉದ್ಯೋಗಿಗಳು ನಿವೃತ್ತಿಯ ಸಮಯದಲ್ಲಿ ಪಡೆಯುವ ರಜಾ ನಗದು (ಲೀವ್ ಎನ್‌ಕ್ಯಾಶ್‌ಮೆಂಟ್) ಸೌಲಭ್ಯದ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗೆ ಏರಿಕೆ ಮಾಡಿ ಕೇಂದ್ರ ಸರಕಾರ ಗುರುವಾರ ಆದೇಶ ಹೊರಡಿಸಿದೆ.

ಕಂದಾಯ ಇಲಾಖೆಯ ಅಂದಾಜಿನ ಪ್ರಕಾರ ನೂತನ ತೆರಿಗೆ ವಿನಾಯಿತಿಯು 2023ರ ಎಪ್ರಿಲ್ 1ರಿಂದ ಅನ್ವಯವಾಗಲಿದ್ದು, ಶೇ.50ರಷ್ಟು ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ಪ್ರಯೋಜನವಾಗಲಿದೆ.

2023-24ನೇ ಸಾಲಿನ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ರಜೆ ನಗದೀಕರಣ ಮೇಲಿನ ತೆರಿಗೆ ರಿಯಾಯಿತಿಗೆ ವಿಧಿಸಲಾಗಿದ್ದ 2 ಲಕ್ಷ ರೂ.ಗಳ ಮಿತಿಯನ್ನು 2002ರಲ್ಲಿ ನಿಗದಿಪಡಿಸಲಾಗಿತ್ತು. ಆಗ ಸರಕಾರಿ ಉದ್ಯೋಗದಲ್ಲಿ ಗರಿಷ್ಠ ಮೂಲವೇತನವು ತಿಂಗಳಿಗೆ 30 ಸಾವಿರ ರೂ. ಆಗಿತ್ತು. ಆದರೆ ಈಗ ಸರಕಾರಿ ವೇತನಗಳಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 25 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಹೇಳಿದ್ದರು.

ರಜಾ ನಗದೀಕರಣದ ಮೇಲಿನ ನೂತನ ತೆರಿಗೆ ವಿನಾಯಿತಿಯಿಂದಾಗಿ, ಉದ್ಯೋಗಿಗಳಿಗೆ ತಮ್ಮ ಸೇವಾವಧಿಯಲ್ಲಿ 7 ಲಕ್ಷ ರೂ.ವರೆಗೂ ತೆರಿಗೆ ಪಾವತಿಯಲ್ಲಿ ಉಳಿತಾಯ ಮಾಡಲು ಅವಕಾಶವಿದೆಯೆಂದು ಕೇಂದ್ರ ಕಂದಾಯ ಇಲಾಖೆಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)