ರಾಷ್ಟ್ರೀಯ
'ಜೈಶ್ರೀರಾಂ' ಘೋಷಣೆ ಕೂಗುತ್ತಾ ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ: BJP ಕೌನ್ಸಿಲರ್ ಸಹಿತ 11 ಮಂದಿ ವಿರುದ್ಧ FIR; ವರದಿ

Screengrab: Twitter/@ashoswai
ಹೈದರಾಬಾದ್: ಮೇದಕ್ ಜಿಲ್ಲೆಯ ನರಸಾಪುರದಲ್ಲಿ 'ಜೈ ಶ್ರೀ ರಾಮ್' ಘೋಷಣೆ ಕೂಗುತ್ತಾ ಮುಸ್ಲಿಂ ವ್ಯಕ್ತಿ ಹಾಗೂ ಆತನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಜೆಪಿ ಕೌನ್ಸಿಲರ್ ಸೇರಿದಂತೆ 11 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು siasat.com ವರದಿ ಮಾಡಿದೆ.
ಘಟನೆ ಮೇ 7 ರಂದು ನಡೆದಿದ್ದು, ಅದೇ ದಿನ ಪ್ರಕರಣ ದಾಖಲಾಗಿದೆ. ಅದಾಗ್ಯೂ, ಘಟನೆಯ ವಿಡಿಯೋ ಗುರುವಾರ ಟ್ವಿಟರ್ನಲ್ಲಿ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಕೇಸರಿ ಶಾಲು ಧರಿಸಿದ ಗುಂಪೊಂದು ಇಮ್ರಾನ್ ಮತ್ತು ಅವರ ತಾಯಿ, ಸಹೋದರಿಯ ಮೇಲೆ ಹಲ್ಲೆ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಘಟನೆಯ ಬಳಿಕ ಇಮ್ರಾನ್ ಸಹೋದರಿ ಗರ್ಭಪಾತಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಗರ್ಭಪಾತವನ್ನು ಹಲ್ಲೆ ಪ್ರಕರಣದೊಂದಿಗೆ ಸೇರಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಎಂದು siasat.com ವರದಿ ಮಾಡಿದೆ.
ಇಮ್ರಾನ್ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಎಚ್ಪಿ ಗ್ಯಾಸ್ ಡೆಲಿವರಿ ಮಾಡುವ ವ್ಯಕ್ತಿ ಲಿಂಗಮ್ (28) ಅವರೊಂದಿಗೆ ಜಗಳವಾಡಿದ್ದರು ಎನ್ನಲಾಗಿದೆ. ಇದೇ ಜಗಳ ನಂತರ ನಂತರ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Day by day Telangana turning into a saffron state with KCR a mute spectator, petty issue being given a communal colour & muslims being attacked in a moblynching style with police adding feul to such incidents with their partisan actions./1 @KTRBRS @spmedak @TelanganaCMO @PTI_News pic.twitter.com/ebZHwI1t4K
— Amjed Ullah Khan MBT (@amjedmbt) May 24, 2023
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ