varthabharthi


ರಾಷ್ಟ್ರೀಯ

ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ಸಂಬಂಧಿಸಿದ ನಿವಾಸಗಳು, ಕಚೇರಿಗಳ ಮೇಲೆ ಐಟಿ ದಾಳಿ

ವಾರ್ತಾ ಭಾರತಿ : 26 May, 2023

Senthil Balaji, Photo: Twitter

ಚೆನ್ನೈ: ರಾಜ್ಯದ ವಿದ್ಯುತ್ ಸಚಿವ ವಿ. ಸೆಂಥಿಲ್ ಬಾಲಾಜಿಗೆ (Senthil Balaji)ಸಂಬಂಧಿಸಿದ ತಮಿಳುನಾಡಿನ ಸುಮಾರು 40  ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ಸಂಘಟಿತ ದಾಳಿ ನಡೆಸಿ ಶೋಧ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕರೂರ್ ಹಾಗೂ  ಕೊಯಮತ್ತೂರು ಸೇರಿದಂತೆ ಇತರ  ನಗರಗಳಲ್ಲಿ ಸಚಿವರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಕಟ್ಟಡದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಚಿವರ ನಿಕಟ ಸಂಬಂಧಿಗಳು ಹಾಗೂ  ಕೆಲವು ಸರಕಾರಿ ಗುತ್ತಿಗೆದಾರರನ್ನು ತೆರಿಗೆ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಕರೂರ್‌ನ ಹಿರಿಯ ಡಿಎಂಕೆ ನಾಯಕರಾದ ಬಾಲಾಜಿ ಅವರು ಅಬಕಾರಿ ಖಾತೆಯನ್ನು ಸಹ ಹೊಂದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)