varthabharthi


ಬೆಂಗಳೂರು

'ಸರ್ವ ಜನಾಂಗದ ಶಾಂತಿಯ ತೋಟ' ಎನ್ನುವ ಜನರ ಆಶಯವನ್ನು ಪುನರ್‌ಸ್ಥಾಪಿಸಿ: ಸಿಎಂಗೆ 'ಬಹುತ್ವ ಕರ್ನಾಟಕ' ಪತ್ರ

ವಾರ್ತಾ ಭಾರತಿ : 26 May, 2023

ಬೆಂಗಳೂರು: ಹಿಂದಿನ ಸರ್ಕಾರ ತಂದಿರುವ ಜನವಿರೋಧಿ ಕಾನೂನುಗಳನ್ನು ಹಿಂಪಡೆದು ಪ್ರತಿ ಪ್ರಜೆಗೂ ನ್ಯಾಯ, ಸಮಾನತೆ , ಘನತೆ , ಸ್ವಾತಂತ್ರ್ಯ  ಹಗಲು ಬಂಧುತ್ವ ದೊರಕುವಂತೆ ನೀತಿ ನಿಯಮಗಳನ್ನು ರಚಿಸಬೇಕು ಹಾಗು ಪಾರದರ್ಶಕ ಆಡಳಿತವನ್ನು ನೀಡಬೇಕು ಎಂದು ಆಗ್ರಹಿಸಿ 'ಬಹುತ್ವ ಕರ್ನಾಟಕ' ಸಂಘಟನೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.

'ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಪ್ರತಿಭಟನೆಯ ಹಕ್ಕನ್ನು ರಕ್ಷಿಸುವುದು, ಅಸ್ಪೃಶ್ಯತೆಯನ್ನು ತೊಲಗಿಸಲು ಕಠಿಣ ಕ್ರಮ ಕೈಗೊಳ್ಳುವುದು ಹಾಗೂ ಹಿಜಾಬ್ ನಿಷೇಧದದಿಂದಾಗಿ ಪರೀಕ್ಷೆಗಳಿಗೆ ಹಾಜರಾಗದೇ ದೂರ ಉಳಿದಿದ್ದ ವಿದ್ಯಾರ್ಥಿಗಳಿಗೆ ಉಂಟಾದ ನಷ್ಟವನ್ನು ಕೂಡಲೇ ಸರಿಪಡಿಸುವುದು ಸೇರಿದಂತೆ ಮುಸ್ಲಿಮ್ ಸಮುದಾಯಕ್ಕೆ 2ಬಿ ಮೀಸಲಾತಿ ಮರುಸ್ಥಾಪಿಸಿ ಮೀಸಲಾತಿಯನ್ನು ಎಲ್ಲಾ ಶೋಷಿತ ಸಮುದಾಯಗಳಿಗೆ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದೆ. 

ಪತ್ರದ ಸಾರಾಂಶ ಇಲ್ಲಿದೆ...

ನ್ಯಾಯ, ಸಮಾನತೆ, ಕೋಮು ಸೌಹಾರ್ದತ ಮತ್ತು ಶಾಂತಿಗಾಗಿ ಶ್ರಮಿಸುತ್ತಿರುವ ನಾಗರಿಕ ಸಮಾಜ ಸಂಘಟನೆಯಾದ ಬಹುತ್ವ ಕರ್ನಾಟಕ, ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಂತಹ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಪಕ್ಷದ ಅಭೂತಪೂರ್ವ ಗೆಲುವಿಗೆ ಅಭಿನಂದನೆ ಸಲ್ಲಿಸುತ್ತದೆ. ರಾಜ್ಯದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಇದ್ದಂತಹ ನೀತಿಗಳು ಹಾಗೂ ರಾಜಕೀಯ ವರಿಸ್ಥಿತಿಯು ರಾಜ್ಯದ ಬಹುಪಾಲು ಜನರಿಗೆ ವಿವಿಧ ರೀತಿಗಳಲ್ಲಿ ಕಟ್ಟ ಅನುಭವ ಹಾಗೂ ಅಭದ್ರತೆಯನ್ನು ಒದಗಿಸಿತ್ತು. ಈ ಬಾರಿ ನಿಮ್ಮ ಪಕ್ಷದ ಈ ಗೆಲುವು ರಾಜ್ಯದ ಶೇ.60ಕ್ಕಿಂತಲೂ ಹೆಚ್ಚಿನ ಜನಸಂಖ್ಯೆಗೆ ಇದ್ದಂತಹ ತೀವ್ರ ನಿರಾಸೆಯನ್ನು ಪ್ರತಿಬಿಂಬಿಸುತ್ತದೆ.

ಹಿಂದಿನ ಸರ್ಕಾರದ ನೀತಿ ಹಾಗೂ ರಾಜಕೀಯವು ಕಡು ಬಡವರು ಹಾಗೂ ಸಮಾಜದ ಅತ್ಯಂತ ದುರ್ಬಲ ವರ್ಗಗಳ ಜನರ ಮೇಲೆ ಬೀರಿದ್ದಂತಹ ಪರಿಣಾಮದ ಕುರಿತು ನಾಗರಿಕ ಸಮಾಜ ಸಂಸ್ಥೆಗಳು ತೀವ್ರ ಕಳವಳಗೊಂಡಿದ್ದವು. ಅಷ್ಟೇ ಅಲ್ಲ, ಅ ನೀತಿಗಳು ಹಾಗೂ ರಾಜಕೀಯವು, ನಮ್ಮ ರಾಜ್ಯ ಮತ್ತು ರಾಷ್ಟ್ರದ ಮೂಲ ಪ್ರಜಾಪ್ರಭತ್ವದ ತತ್ವಗಳಿಗೆ ವಿರುದ್ಧವಾಗಿದುದ್ಧರ ಕುರಿತು ನಾಗರಿಕ ಸಮಾಜ ಸಂಸ್ಥೆಗಳು ಈ ಬಾರಿ ಯಾವ ರೀತಿ ತೊಡಗಿಸಿಕೊಂಡಿದ್ದವು ಎನ್ನುವುದಕ್ಕೆ ಈ ಚುನಾವಣೆಗಳು ಸಾಕ್ಷಿಯಾಗಿವೆ. ನಿಮ್ಮ ಪಕ್ಷವು, ಪ್ರಜಾಪ್ರಭುತ್ವವನ್ನೇ ಸವೆಸುತ್ತಿದ್ದಂತಹ, ಎಗ್ಗಿಲ್ಲದ ನಡೆಯುತ್ತಿದ್ದಂತಹ ಭ್ರಷ್ಟಾಚಾರದ ಕುರಿತು ಧ್ವನಿ ಎತ್ತಿತು. ಅದರ ಕೇವಲ ಭ್ರಷ್ಟಾಚಾರವಷ್ಟೇ ಅಲ್ಲ, ನ್ಯಾಯ, ಸ್ವಾತಂತ್ರ್ಯ, ಸಮಾನತ ಹಾಗೂ ಭ್ರಾತೃತ್ವಗಳ ನಮ್ಮ ಸಾಂವಿಧಾನಿಕ ಬದ್ಧತೆಗಳಲ್ಲಿನ ಭ್ರಷ್ಟಾಚಾರದ ಕುರಿತು ಸಹ ನಾವು ಸಮಾನ ಕಾಳಜಿಯನ್ನು ಹೊಂದಿದ್ದೇವೆ. ಪ್ರಗತಿಪರ, ಬಹುತ್ವದ ರಾಜಕೀಯ ಸಂಸ್ಕೃತಿ ಹಾಗೂ ಪ್ರಜಾಪ್ರಭುತ್ವದ ನಿಯಮಗಳು ಮತ್ತು ಕಾರ್ಯನಿರ್ವಹಣೆಯ ಪುನರ್‌ಸ್ಥಾಪನೆ ನಮ್ಮ ಅಭಿಯಾನದ ಕೇಂದ್ರಬಿಂದುವಾಗಿತ್ತು. ಏರಂದರ ಈ ವಿಷಯಗಳು ಹಿಂದಿನ ಸರ್ಕಾರದ ಅವಧಿಯಲ್ಲಿ ನಮ್ಮ ಸಾರ್ವಜನಿಕ ಜೀವನದಲ್ಲಿ ಸಂಪೂರ್ಣವಾಗಿ ಅಳಿಸಿ ಹೋಗದಿದ್ದರೂ, ಮಹತ್ತರವಾದ ಮಟ್ಟಿಗೆ ಅನಾಚರಣೆಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಬಹುತ್ವ ಕರ್ನಾಟಕ ಸಂಘಟನೆಯು ಹಿಂದಿನ ಸರ್ಕಾರದ ಅವಧಿಯ ಶೂನೆಯಲ್ಲಿ ಶಿಕ್ಷಣ, ಆರೋಗ್ಯ ಸೇವೆಗಳು ಹಾಗೂ ಪೌಷ್ಟಿಕತೆ, ಮಹಿಳೆಯರ ಹಕ್ಕುಗಳು, ಅಲ್ಪಸಂಖ್ಯಾತರು, ಕಾರ್ಮಿಕರು ಮತ್ತು ಶೂಳಗೇರಿ ನಿವಾಸಿಗಳು, ಆರ್ಥಿಕತ, ಕೃಷಿ, ಪರಿಸರ, ಗ್ರಾಮೀಣ ಅಭಿವೃದ್ಧಿ, ಸಂಯುಕ್ತ ವ್ಯವಸ್ಥೆ, ಪ್ರಜಾಪ್ರಭುತ್ವ ಮತ್ತು ಅಡಳಿತ ಒಳಗೊಂಡಂತ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟಂತ ಹಿಂದಿನ ಸರ್ಕಾರದ ಕಾರ್ಯಪ್ರದರ್ಶನ ಹಾಗೂ ಪರಿಣಾಮಗಳನ್ನು ವಿಮರ್ಶಿಸುವ ರಿಪೋರ್ಟ್ ಕಾರ್ಡುಗಳನ್ನು ಬಿಡುಗಡೆಗೊಳಿಸಿತ್ತು. ಈ ರಿಪೋರ್ಟ್‌ ಕಾರ್ಡುಗಳಲ್ಲಿದ್ದಂತಹ ಅಂಶಗಳನ್ನು ಅಧರಿಸಿ, ರಾಜ್ಯದ ಆರ್ಥಿಕ ಪರಿಸ್ಥಿತಿ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಆರೋಗ್ಯದ ಪುನರ್‌ಸ್ಥಾಪನೆಗಾಗಿ ನಿಮ್ಮ ಸರ್ಕಾರ ಕಾರ್ಯನಿರ್ವಹಿಸಬೇಕು, ಸರ್ವ ಜನಾಂಗದ ಶಾಂತಿಯ ತೋಟ ಎನಿಸಿಕೊಂಡಿದ್ದಂತಹ ರಾಜ್ಯದ ಹೆಸರನ್ನು ಪುನಃ ತರುವ ನಿಟ್ಟಿನಲ್ಲಿ ನಮಗನಿಸಿರುವಂತಹ ಹಲವು ತುರ್ತು ಹಾಗೂ ದೀರ್ಘಾವಧಿ ಶ್ರಮಗಳನ್ನು ತಮ್ಮ ಗಮನಕ್ಕೆ ತರಲು ಬಯಸಿದ್ದೇವೆ.

ಕೇವಲ ಕರ್ನಾಟಕದ ಜನರಿಗಷ್ಟೇ ಅಲ್ಲದೆ, ಭಾರತದ ಎಲ್ಲರಿಗಾಗಿಯೂ ಅಭಿವೃದ್ಧಿ, ಪ್ರಜಾಪ್ರಭುತ್ವ, ನ್ಯಾಯ ಹಾಗೂ ಸುಸ್ಥಿರತೆಯಂತಹ ಪರಿಕಲ್ಪನೆಗಳ ಪರಿಷ್ಕರಣೆ ಮತ್ತು ಮುರುವ್ಯಾಖ್ಯಾನಿಸುವ ಅವಕಾಶ ಹೊಸ ಸರ್ಕಾರಕ್ಕಿದೆ ಎನ್ನುವುದು ನಮ್ಮ ನಂಬಿಕೆಯಾಗಿದೆ. ಕರ್ನಾಟಕ ರಾಜ್ಯವು ಇತರ ಸ್ಥಳಗಳಲ್ಲಿ ಸುಧಾರಣೆಯಾಗಿರುವ ಯಶಸ್ವಿ ಉದಾಹರಣೆಗಳಿಂದ ಪ್ರೇರಣೆ ಪಡೆಯಬೇಕು.

ಸರ್ಕಾರಿ ಶಾಲೆಗಳನ್ನು ಎಲ್ಲರಿಗೂ ಆಕರ್ಷಿಸುವಂತೆ ಮಾಡುವುದು, ಸ್ಥಳೀಯವಾಗಿ ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಕುರುಂಬಶ್ರೀ ಸ್ಥಳೀಯ ಮುಟ್ಟದಲ್ಲಿ ಮಹಿಳೆಯರ ಉದ್ಯೋಗಕ್ಕೆ ಅನುಕೂಲವಾಗುವಂತಹ ಯೋಜನೆಗಳ ಅನುಷ್ಠಾನ, ಇಂತಹವು ಕೆಲವು ಉದಾಹರಣೆಗಳಾಗಿದೆ. ಪ್ರಸ್ತುತ ಕೊರತ ಎದುರಿಸುತ್ತಿರುವ - ಜಾತಿ, ಧರು, ಪ್ರದೇಶ ಹಾಗೂ ಲಿಂಗ ಒಳಗೊಂಡಂತೆ ಎಲ್ಲಾ ಅಂಶಗಳಲ್ಲಿಯೂ ನ್ಯಾಯೋಚಿತ ಪ್ರಾತಿನಿಧ್ಯ ಇರುವಂತೆ ಕ್ಯಾಬಿನೆಟ್‌ನಲ್ಲಿ ಸ್ಥಾನ ಹಂಚಿಕೆಯಾದರೆ ಅದು ಎಲ್ಲರನ್ನು ಒಳಗೊಂಡಂತಹ ರಾಜಕೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಂತಾಗುತ್ತದೆ.

ನ್ಯಾಯ ( ಸಾಮಾಜಿಕ, ಆರ್ಥಿಕ, ಪರಿಸರ ಹಾಗೂ ರಾಜಕೀಯ) - ಒಂದು ದಿನಕ್ಕೆ 12 ಗಂಟೆಗಳ ಕೆಲಸದಂತಹ, ಪ್ರತಿಗಾಮಿ ಮತ್ತು ಜನವಿರೋಧಿಯ ಜೊತೆಗೆ ಸಂವಿಧಾನಕ್ಕೆ ವಿರುದ್ಧವಾಗಿರುವ ಕಾರ್ಮಿಕ ವಿರೋಧಿ ಕಾನೂನುಗಳ ಪರಿಷ್ಕರಣೆ ಹಾಗೂ ನಿರ್ಮೂಲನೆ, - ಘನ ತ್ಯಾಜ್ಯ ನಿರ್ವಹಣೆಯಲ್ಲಿರುವ ಗುತ್ತಿಗೆ ವ್ಯವಸ್ಥೆ ನಿಲ್ಲಿಸುವುದು, ಪೌರಕಾರ್ಮಿಕರ ಹುದ್ದೆಗಳನ್ನು ಖಾಯಂಗೊಳಿಸುವರು. (ಆಶ್ವಾಸನೆ ನೀಡಿದ್ದಂತೆ), ಹಾಗೂ ಅಹಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಸಿದ್ಧ ಉಡುಪು ಕಾರ್ಖಾನೆಗಳ ಕಾರ್ಮಿಕರು, ಮನೆ ಕೆಲಸದವರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕರ್ತರು ಮತ್ತು ಮಧ್ಯಾಹ್ನದ ಬಿಸಿಯೂಟದಂತಹ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವ ಕಾರ್ಮಿಕರ ಪಡೆಗಳ ಬಹುಕಾಲದಿಂದ, ಬಾಕಿ ಉಳಿದಿರುವ ಕುಂದುಕೊರತೆಗಳನ್ನು ಕೂಡಲೇ - ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಎಲ್ಲರೂ ತಮಗೆ ಭೂಒಡೆತನವನ್ನು ಕಲ್ಪಿಸುವಂತಹ ಕಾನೂನನ್ನು ಜಾರಿಗೊಳಿಸುವಂತೆ ಒತ್ತಾಯಿಸುತ್ತಿದ್ದು, ಅವರೆಲ್ಲರಿಗೂ ಕ್ರಯ ಪತ್ರಗಳನ್ನು ನೀಡಬೇಕು. 

2019ರ ಸಾಮಾಜಿಕ-ಆರ್ಥಿಕ ಸಮೀಕ್ಷೆಯ (ಜಾತಿ ಜನಗಣತಿ) ಫಲಿತಾಂಶರನ್ನು ಸಾರ್ರಜನಿಕರಾಗಿ ಬಿಡುಗಡೆ ಮಾಡುವರು, ಇದರ ಆಧಾರದ ಮೇಲೆ ಶಿಕ್ಷಣವನ್ನು ಎಲ್ಲರಿಗೂ ದೊರಕುವಂತೆ ಮಾಡಲು ಚರ್ಚೆಯನ್ನು ಆರಂಭಿಸುವುದು, ಮುಸ್ಲಿಮರಿಗೆ 20 ಮೀಸಲಾತಿಯನ್ನು ಪುನರ್‌ಸ್ಥಾಪಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)