ಅಮೆರಿಕ ಪೊಲೀಸರ ಗುಂಡಿಗೆ ಬಲಿಯಾದ ಭಾರತೀಯ ಮೂಲದ ವ್ಯಕ್ತಿ
ವಾಷಿಂಗ್ಟನ್: ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲು ಮುಂದಾದ 42 ವರ್ಷದ ಭಾರತೀಯ ಮೂಲದ ವ್ಯಕ್ತಿಯನ್ನು ಅಮೆರಿಕದ ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
ಸ್ಯಾನ್ ಅಂಟೋನಿಯೊ ನಗರದ ಅಪಾರ್ಟ್ಮೆಂಟ್ನಲ್ಲಿ ಮಾರಕಾಯುಧದಿಂದ ಹಲ್ಲೆ ನಡೆಸಿರುವ ಬಗ್ಗೆ ದೊರೆತ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ 51 ವರ್ಷದ ಮಹಿಳೆಯೊಬ್ಬಳು ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಆಕೆಯ ಹೇಳಿಕೆಯಂತೆ ಆರೋಪಿ, ಉತ್ತರ ಪ್ರದೇಶ ಮೂಲದ ಸಚಿನ್ ಸಾಹೂ ಎಂಬಾತನ ಪತ್ತೆಕಾರ್ಯದಲ್ಲಿ ತೊಡಗಿದ್ದರು. ಕಾರಿನಲ್ಲಿ ಸಾಗುತ್ತಿದ್ದ ಸಾಹೂನನ್ನು ವಿಚಾರಣೆಗಾಗಿ ತಡೆದು ನಿಲ್ಲಿಸಿದಾಗ ಸಾಹೂ ತನ್ನ ವಾಹನವನ್ನು ಪೊಲೀಸರ ಮೇಲೆಯೇ ಚಲಾಯಿಸಲು ಮುಂದಾಗಿದ್ದಾನೆ. ಆಗ ಪೊಲೀಸರು ಗುಂಡು ಹಾರಿಸಿ ಆತನನ್ನು ಹತ್ಯೆ ಮಾಡಿದ್ದಾರೆ ಎಂದು ಸ್ಯಾನ್ ಅಂಟೋನಿಯೊ ಪೊಲೀಸರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
Next Story