varthabharthi

ಕೋವಿಡ್ ವಾರಿಯರ್ಸ್‌ಗೆ ಸೇನೆಯ ಗೌರವ ನಮನ

ದೇಶಾದ್ಯಂತ ಕೊರೋನ ವೈರಸ್ ಮಹಾಮಾರಿಯ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ಮುಂಚೂಣಿಯ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಭಾರತೀಯ ವಾಯುಪಡೆ ರವಿವಾರ ದೇಶಾದ್ಯಂತ ವಿಶೇಷ ವಿಮಾನ ಹಾರಾಟಗಳನ್ನು ನಡೆಸಿ ಗೌರವ ಸಲ್ಲಿಸಿತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಿವಾರ ವಾಯುಪಡೆ ಹೆಲಿಕಾಪ್ಟರ್ ಪುಷ್ಪವೃಷ್ಟಿಗೈದಾಗ ವೈದ್ಯರು, ನರ್ಸ್‌ಗಳು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಕರತಾಡನಗೈದರು.

Comments (Click here to Expand)