ಶತಕ ಗಳಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್
ಋತುರಾಜ್ ಗಾಯಕ್ವಾಡ್ | PC : X \ @BCCI
ಚೆನ್ನೈ : ಋತುರಾಜ್ ಗಾಯಕ್ವಾಡ್ ಅವರು ಐಪಿಎಲ್ನಲ್ಲಿ ಶತಕ ಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊದಲ ನಾಯಕನೆಂಬ ಹಿರಿಮೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸಿದರು.
ಲಕ್ನೊ ವಿರುದ್ಧ ಮಂಗಳವಾರ ಆಕರ್ಷಕ ಶತಕ ಗಳಿಸಿದ್ದ ಗಾಯಕ್ವಾಡ್ ಚೆನ್ನೈ ತಂಡ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಲು ನೆರವಾದರು.
ಧೋನಿ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಸಿಎಸ್ಕೆ ನಾಯಕನಾಗಿ ದೀರ್ಘ ಸಮಯ ದಾಖಲೆ ಕಾಯ್ದುಕೊಂಡಿದ್ದರು. ಧೋನಿ 2019ರ ಐಪಿಎಲ್ನಲ್ಲಿ ಆರ್ಸಿಬಿ ವಿರುದ್ಧ 84 ರನ್ ಗಳಿಸಿದ್ದರು.
ಬಲಗೈ ಬ್ಯಾಟರ್ ಗಾಯಕ್ವಾಡ್ ಐಪಿಎಲ್ನಲ್ಲಿ 56 ಎಸೆತಗಳಲ್ಲಿ 2ನೇ ಶತಕ ಗಳಿಸಿದರು.
Next Story